ವಿಶ್ವ ಸಂಸ್ಥೆಯ ಒಂದು ಮಹತ್ತರ ಸಮಾವೇಶದಲ್ಲಿ ಭಾಗವಹಿಸಿದವರಿಗೆ, ಒಂದು ವಿಡಿಯೋ ಸಂದೇಶವನ್ನು ರವಾನಿಸಿದ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಪೌಲ್ ರಿಚರ್ಡ್ ಗಾಲ್ಲಾಘರ್ ರವರು ‘ಶಕ್ತಿ ಪರಿವರ್ತನಾ ಲಭ್ಯತೆ ಹಾಗೂ ಶುದ್ಧ ಶಕ್ತಿ ರೂಪವನ್ನು, ಬಡ ದೇಶಿಗರಿಗೆ ಲಭ್ಯಗೊಳಿಸುವುದು ಸಿರಿವಂತ ದೇಶಿಗರ ಕರ್ತವ್ಯವಷ್ಟೆ’. ಎ೦ದು ಹೇಳಿದ್ದಾರೆ.

ಲಿಸಾ ಜೆಂಗಾರಿನಿಯವರಿಂದ:

‘ಪವಿತ್ರ ಪೀಠವು, 2030 ರ ಧ್ಯೇಯ 7 ರ ಸಮರ್ಥನೀಯ ಬೆಳವಣಿಗೆ (SDG7) ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ತುದಿಗಾಲಿನಲ್ಲಿ ನಿಂತಿದೆ. ಸರ್ವರಿಗೂ ಕೈಗೆಟುಕುವ, ವಿಶ್ವಾಸಾರ್ಹ, ಸಮರ್ಥನೀಯ, ಹಾಗೂ ಆಧುನಿಕ ಶಕ್ತಿ ಪರಿವರ್ತನ ಕಾರ್ಯವು “ಎಂದಿಗಿಂತಲೂ ತುರ್ತಾಗಿ ನಡೆಸಬೇಕಾಗಿದೆ” ಎಂಬ ನಂಬಿಕೆಯನ್ನು ಹೊರ ಹಾಕಿದೆ.

ಸಹಸ್ರಾರು ಬಾಳಿನ ಅಂಧಕಾರತೆಗೆ, ವಿದ್ಯುಚ್ಚಕ್ತಿ ಬೆಳಗದೆ ಇನ್ನೂ?

ಪ್ರಸ್ತುತ 759 ಮಿಲಿಯನ್ ಜನತೆ ಪ್ರಪಂಚದಾದ್ಯಂತ ವಿದ್ಯುಚ್ಛಕ್ತಿ ಇಲ್ಲದೆ ಅಂಧಕಾರದಲ್ಲಿ ಜೀವಿಸುತ್ತಿದ್ದಾರೆ.

ಗುರುವಾರದಂದು ವಿಶ್ವಸಂಸ್ಥೆ ನಡೆಸಿದ ಮಹತ್ತರ ವಸ್ತು ವಿಷಯವಾದ,SDG7 ನ ಸಾಧನೆಯ ಕಾರ್ಯದ ವೇಗೋತ್ಕರ್ಷಣೆಯತ್ತ ಕೇಂದ್ರೀಕೃತವಾಗಿತ್ತು. ಈ SDG7 ವಸ್ತು ವಿಷಯವು 2030ರ ಕಾರ್ಯಸೂಚಿ ಮತ್ತು ಪ್ಯಾರಿಸ್ ಒಪ್ಪಂದವನ್ನು ಬೆಂಬಲಿಸಿದೆ.

ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿಗಳಿಂದ ಶನಿವಾರದಂದು ಬಿಡುಗಡೆಯಾದ ವಿಡಿಯೋ ಸಂದೇಶದಲ್ಲಿ ‘ ಕೈಗೆಟುಕುವ, ಮತ್ತು ವಿಶ್ವಾಸಾರ್ಹ ಶಕ್ತಿರೂಪವು, ಬಡತನ ಮತ್ತು ಹಸಿವನ್ನು ಅಳಿಸಿ ಹಾಕಲು ನಿರ್ಣಾಯಕ ಅಂಶವೇ ಸರಿ.’ ಎಂದು ತಿಳಿಸಿ, ಶಕ್ತಿರೂಪದ ಸಾರ್ವರ್ತಿಕ ಲಭ್ಯತೆಯ ಪ್ರಾಮುಖ್ಯತೆಯನ್ನು ಎಲ್ಲರಿಗೂ ನೆನಪಿಸಿದ್ದಾರೆ.

ಈ ಮಹತ್ತರ ವಿಷಯವಾಗಿ ಮಹಾ ಧರ್ಮಾಧ್ಯಕ್ಷರಾದ ಪೌಲ್ ರಿಚರ್ಡ್ ಗಾಲ್ಲಾ ಘರ್ ಹೇಳಿಕೆ ನೀಡಿ “ ಶಕ್ತಿಯ ಬೆಲೆ ಏರಿಕೆಯ ತಾರ್ಕಿಕತೆ, ನೈತಿಕ ವ್ಯಾಪಾರ, ಮತ್ತು ಸಬ್ಸಿಡಿಗಳು ಬಡವರಿಗೆ ಅತ್ಯಗತ್ಯ”.  ಬಡ ಬಗ್ಗರ ಜೀವನ ಶೈಲಿಯತ್ತ ವಾಲಿದ ಇವರು, ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಸಹ, ಬಡವರಿಗೆ ದಿನನಿತ್ಯದಲ್ಲಿ ಶಕ್ತಿರೂಪಗಳು ಕೈಗೆಟುಕದ ಗಗನ ಕುಸುಮವಾಗಿದೆ, ಎ೦ದರು.

ಉತ್ಪಾದನೆ ಮತ್ತು ಬಳಕೆಯ ಮೇಲಿನ ಋಣಾತ್ಮಕ ಪರಿಣಾಮ:

ಮುಂದುವರಿದ ಆಂಗ್ಲ ಮೂಲದ ಪೀಠಾಧಿಕಾರಿಗಳು, ಎಲ್ಲರ ಚಿತ್ತ ಸೆಳೆದು, ಈ ಭೂಮಿಯ ಮೇಲಿನ ಶಕ್ತಿಯ ಉತ್ಪಾದನೆ/ಬಳಕೆಗಳ ಋಣಾತ್ಮಕ ಪರಿಣಾಮಗಳು ಇಲ್ಲಿನ ಬಡವರ ಮೇಲಿನ ಸಾಮಾಜಿಕ ಅವಿಶ್ರಾಂತತೆ, ಆರೋಗ್ಯದ ಅಡ್ಡ ಪರಿಣಾಮತೆ, ಸಂಘರ್ಷಣೆಗಳು ಎಂಬ ಅನೇಕಾನೇಕ ಮಾನವ ಹಕ್ಕುಗಳ ಉಲ್ಲಂಘನೆಗೆ    ಆದಿ ಮೂಲವಾಗುತ್ತದೆ  ಎಂದಿದ್ದಾರೆ.

ಪೂಜ್ಯರ ಸೂಚನೆ ಮೇರೆಗೆ, ಹವಾಮಾನ ಬದಲಾವಣೆ ಕೃಷಿ ಕಾರ್ಯವನ್ನು ಅಡ್ಡಿಪಡಿಸುತ್ತದೆ.  ಜಲ ಅಸುರಕ್ಷತೆ ಮತ್ತು ಅದರ ಕೊರತೆ ಹಾಗೂ ಅತಿರೇಖ ದ ಹವಾಮಾನ, ಜನ ಜೀವನವನ್ನು ನಾಶಗೊಳಿ ಸುತ್ತಿದೆ, ಇದರ ಸಲುವಾಗಿ ಸಹಸ್ರಾರು ಜನರು ಮನೆ ಮಠ ತೊರೆದು, ವಲಸಿಗ ರಾಗಿ ಬೇರೆಡೆ ತೆರಳುವ ಸಂಕಷ್ಟ ಒಡ್ಡುತ್ತಿದೆ, ಎಂದರು.

‘ಬಿಸಾಡುವ ಸಂಸ್ಕೃತಿ’ ಎಂಬ ಆಧುನಿಕತೆಯ ಬದಲಾವಣೆ:

‘ಪವಿತ್ರ ಪೀಠ ’ ಮಠದ ಪ್ರಕಾರದಂತೆ, ಶಕ್ತಿ ಪರಿವರ್ತನೆಯು ಚುರುಕಾಗಬೇಕಾಗಿದೆ. ಅಧಿಕ ಸಾಮರ್ಥ್ಯಮಯವಾಗಿದ್ದು, ವಿಶೇಷವಾಗಿ ಶಕ್ತಿ ರೂಪದ ಅಪವ್ಯಯವಾಗುವಂತ ಪ್ರದೇಶಗಳಲ್ಲಿ, ಅದರ ಬಳಕೆಯ ಉಸ್ತುವಾರಿ ನಡೆಸಬೇಕು, ಮತ್ತು ಅಧಿಕ ಶಾಂತಿಗಾಗಿ ಶಕ್ತಿಯ ಉತ್ಪಾದನೆಯಾಗ ಬೇಕಿದೆ, ಎಂಬುದಾಗಿದೆ.

“ಬಿಸಾಡಬಹುದಾದ ಉತ್ಪಾದನಾ ವಸ್ತುಗಳು, ಕೀಳುಮಟ್ಟದ ಉತ್ಪಾದನೆಗಳು, ಒಂದೇ ಬಾರಿ ಉಪಯೋಗಿಸುವ ವಸ್ತುಗಳು ಮತ್ತು ವಾಣಿಜ್ಯತಂತ್ರದ ಉತ್ಪಾದನೆಗಳು, ಇವೆಲ್ಲವೂ ‘ ಬಿಸಾಡುವ ಸಂಸ್ಕೃತಿ ’ ಯ ರೋಗ ಲಕ್ಷಣಗಳು” ಎಂದು ಮಹಾ ಧರ್ಮಾಧ್ಯಕ್ಷರು ಗಲ್ಲಾಘರ್ ಅರುಹಿದ್ದಾರೆ.

ಆದ್ದರಿಂದ ಅತ್ಯಧಿಕ ಶಕ್ತಿ ಬಳಕೆದಾರರು ಒಂದು ಬಾಧ್ಯತೆಗೆ ಒಳಪಟ್ಟು, ಇನ್ನೂ ಶಕ್ತಿ ಪರಿವರ್ತನಾ ಲಭ್ಯತೆ ತಲುಪದವರತ್ತ ಸಮೀಕ್ಷೆ ನಡೆಸಿ, ಅವರತ್ತ ಚಿತ್ತ ಹರಿಸಿ, ಇಂತವರೂ ಸಹ ಮಾನವೀಯ ಘನತೆ ಯಲ್ಲಿ ಜೀವಿಸಲು ಎಡೆ ಮಾಡಿಕೊಡಬೇಕಾಗಿದೆ.

ಶಕ್ತಿ ಅಪವ್ಯಯ ನಾಗರೀಕತೆಗೆ ಅನ್ಯಾಯ:

ಶಕ್ತಿಯ ಲಭ್ಯತೆ, ಮತ್ತು ಶುದ್ಧ ಶಕ್ತಿ ಎಂಬುದು ಇವುಗಳಿಂದ ವಂಚಿತರಾದ ಮಿಲಿಯನ್ ಗಟ್ಟಳೆ ನಮ್ಮ ಬಾಂದವರಿಗೆ ನಾವು ಋಣಿಯಾಗಿರುವುದು ನಮ್ಮ ಕರ್ತವ್ಯ.ಅಪವ್ಯಯ ಗೊಳಿಸುವವರಿಗೆ ವಂಚಿತ ಜನಾಂಗದವರಿಂದ ಕಸಿದುಕೊಂಡಷ್ಟೇ ಕೆಟ್ಟದು ಎಂದರ್ಥ. ಸರ್ವರಿಗೂ ಇದು ವಿಶೇಷವಾಗಿ ಬಡತನದ ಬೇಗುದಿಯಲ್ಲಿ ತೊಳಲು ವವರಿಗೆ, ನಾವು ತೋರಬೇಕಾದ ಕರ್ತವ್ಯ. ಮಹಾ ಧರ್ಮಾಧ್ಯಕ್ಷರು ಗಾಲ್ಲಾಘರ್ ರವರು ವಿಶ್ವಗುರುಗಳ ಮಾತುಗಳನ್ನು ಉಲ್ಲೇಖಿಸಿ, ‘ ನಾಗರೀಕತಗೆ ಶಕ್ತಿಯು ಅವಶ್ಯಕ. ಆದರೆ ಶಕ್ತಿಯ ಬಳಕೆ ನಾಗರೀಕತೆಯನ್ನು ವಿನಾಶಗೊಳಿಸಬಾರದು.’ ಎಂದು ತಿಳಿಸಿ, ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಕನ್ನಡಕ್ಕೆ: ಮೇರಿ ಎಲಿಜಬೆತ್