ವ್ಯಾಟಿಕನ್ ಸುದ್ದಿ ಬರಹಗಾರರಿಂದ :
ವಿಶ್ವಗುರು ಫ್ರಾನ್ಸಿಸ್ ರು ರಷ್ಯಾ ಒಕ್ಕೂಟದ ಸಂಪೂರ್ಣ ಕಥೋಲಿಕ ಸಮದಾಯವನ್ನು ಉದ್ದೇಶಿಸಿ, “ ಈ ಸಮದಾಯವು ಒಂದು ಸುವಾರ್ತಾ ಪ್ರಸರಣೆಯ ಒಂದು ಬೀಜದ ಕಾಳು ಆಗಿದ್ದು, ಸಂತಸ, ಮತ್ತು ದೀನತೆಯಿಂದ, ದೇವರ ಸಾಮ್ರಾಜ್ಯದ ಒಂದು ಅಸ್ಪಷ್ಟ ಪಾರದರ್ಶಕತೆಯಿಂದ ಹೊರ ಹೊಮ್ಮತಕ್ಕದ್ದಾಗಿದೆ”. ಎಂಬಂತಹ ಆಶಾಭಾವವನ್ನು ವ್ಯಕ್ತೈಸಿದ್ದಾರೆ.


ಪೂಜ್ಯರು ರಷ್ಯಾದಲ್ಲಿನ ¯Áån£ï -ರೈಟ್ ಕಥೋಲಿಕರ ¥ÉæövÀ ಆಡಳಿತ ಸಂಸ್ಥಾಪನೆಯ 30 ನೇ ವಾರ್ಷಕೋತ್ಸವ ದ ಆಚರಣೆಯನ್ನು ಗುರುತಿಸಿ ಬರೆದು, ತಮ್ಮ ಸಂದೇಶವನ್ನು ರವಾನಿಸಿ, ಅದರಲ್ಲಿ ಪೂಜ್ಯರು “ಚರ್ಚ್ ನ ಸಮುದಾಯವು ಕ್ರಿಸ್ತರಲ್ಲಿ ಐಕ್ಯತೆ ಹೊಂದಿರುವುದನ್ನು ದೃಧೀಕರಿಸುವ ಬಯಕೆ ಹೊತ್ತಿದೆ”. ಎ೦ದು ನುಡಿದು, ಸಮುದಾಯದೊಂದಿಗಿನ ಆಧ್ಯಾತ್ಮಿಕ ಉಪಸ್ಥಿತಿಯ ಭರವಸೆ ನೀಡಿದ್ದಾರೆ.


ವಿಶ್ವಗುರುಗಳು ತಮ್ಮ ಪತ್ರದಲ್ಲಿನ ಉಲ್ಲೇಖ ಮುಂದುವರೆಸಿ, ‘ ಸಂಪೂರ್ಣ ಸಮುದಾಯವು ಒಂದು ದೈವ ಕರೆಯ ಅನ್ವೇಷಣೆಯಲ್ಲಿದೆ, ಹಾಗೂ ಅಲ್ಲಿನವರಿಗೆಲ್ಲಾ ತಲುಪಬೇಕಾಗಿದೆ, ಏಕೆಂದರೆ ದೈವ ಸಾಕ್ಷಿಗಳಾಗುವುದು, ಆನಂದಮಯವಾದದ್ದು ಮತ್ತು ಸಮಾಜದ ಸಾಮಾನ್ಯ ಒಳಿತಿಗೆ ಕೊಡುಗೆಯಾಗಬಲ್ಲದು. ವಿಶೇಷವಾಗಿ, ಕ್ರಿಸ್ತ ಸಾಕ್ಷಿಗಳು ಇತರರ ನಿರ್ವಹಣೆ, ಅದರಲ್ಲೂ ನಿರ್ಗತಿಕರ ಹಾಗೂ ಕಡೆಗಾಣಿಸಲ್ಪಟ್ಟವರ ಸೇವಾಶುಶ್ರೂಷೆಗಳಲ್ಲಿ ಟೊಂಕ ಕಟ್ಟಿ ನಿಂತವರು’ ಎಂಬ ತಮ್ಮ ಆಶಾವಾದಿತ್ವವನ್ನು ಅರುಹಿದ್ದಾರೆ.


ಶುಭಸಂದೇಶದ ಪ್ರಕಾರದ ಬೆಳವಣಿಗೆಗೆ ವಾರ್ಷಿಕೋತ್ಸವ ಒಂದು ಸಾಂಧರ್ಭಿಕ :
ವಿಶ್ವಗುರುಗಳು ಈ ಆಚರಣೆಯನ್ನು ಕೇವಲ ‘ ನ್ಯಾಯ್ಯಾಂಗ ಕಾಯಿದೆಗಳ’ ನೆನಪಾಗಿಸುವುದು ಮಾತ್ರವಷ್ಟೇ ಅಲ್ಲ, ಈ ಸಮಯವ್ರ ನಾವು ಭಗವಂತನಿಂದ ಸ್ವೀಕರಿಸಿದ ಸಕಲ ಒಳಿತನ್ನೂ ನಮ್ಮ ನೆರೆಯ ಸಂತರುಗಳಾದ ಸಹೋದರ, ಸಹೋದರಿಯರಿಂದ ಪಡೆದ ಸ್ನೇಹ ಸಹಾಯದ ಅಂಶಗಳನ್ನೂ ನೆನಪಿಗೆ ತರುವಂತ ಕೃತಜ್ಞತಾ ಸಮಯವಿದು, ಏಕೆಂದರೆ ಜೀವನ ಯಾತ್ರೆಯನ್ನು ಮುನ್ನಡೆಸಲು ಶಕ್ತಿ ನೀಡುವವರು ಅವರೇ ಎಂದಿದ್ದಾರೆ. ಹಾಗೂ ಪೂಜ್ಯರು ಮುಂದುವರಿದು ಮಾತನಾಡಿ, ‘ ಶುಭಸಂದೇಶ ಪ್ರಕಾರ ಬೆಳೆಯಿರಿ’ ದೇವರ ವಾಕ್ಯಕ್ಕೆ ವಿಧೇಯರಾಗ ಬಯಸುವ ಸಮುದಾಯವು, ಭರವಸೆಯಿಂದ ಕಳೆದುಂಬಿ, ಸಾಂತ್ವನ ಶಕ್ತಿಯನ್ನು ದಿವ್ಯ ಚೇತನರಿಂದ ನಿರಂತರ ಗೊಳಿಸಲ್ಪಡುವರು; ತೆರೆಯಿರಿ, ನಿಮ್ಮಷ್ಟಕ್ಕೆ ನೀವೇ, ಪ್ರೀತಿ ಎಂಬ ಶ್ರೇಷ್ಠ ಆಜ್ಞೆಗೆ ವಿಧೇಯಕರಾಗಿ, ಎಲ್ಲರೊಂದಿಗೂ ಒಗ್ಗಟ್ಟಿನ ಮನೋಭಾವದಿಂದ ತಮ್ಮಲ್ಲಿದ್ದದ್ದನ್ನು ಪರಸ್ಪರ ಹಂಚಿಕೊಳ್ಳಿ ವಿಶೇಷವಾಗಿ ಸಾಂಪ್ರಾದಾಯಿಕ ಕ್ರೈಸ್ಥರೊಂದಿಗೆ’ ಎ೦ದು ನುಡಿದರು.


ಚಚ್೯ನ ಸ್ವಜಾಗೃತಿಯ ಪ್ರಾಮುಖ್ಯತೆ :
“ಆದ್ದರಿಂದ ಈ ವಾರ್ಷಿಕೋತ್ಸವವು, ಕ್ರೈಸ್ತ ಧರ್ಮದಲ್ಲಿನ ಚರ್ಚ್ ಗಳ ಸ್ವಜಾಗೃತಿಯನ್ನು ಪೋಷಿಸುವ ಸಮಯವಾಗಿದೆ. ಇದರಿಂದಾಗಿ, ಚರ್ಚ್ ಗಳು, ನವೀಕರಣಗೊಂಡು, ಪಾವನತೆ ಹೊಂದಿ, ದೈವ ಸಂಕಲ್ಪದಂತೆ ಪ್ರತಿ ಶೋಧನೆಗಳನ್ನೂ ಜಯಿಸಿ, ಸ್ವಯಂ ಉಲ್ಲೇಖತೆಯನ್ನೂ, ಸ್ವಯಂ ಆಚರಣೆಗಳನ್ನೂ ತೊಡೆದುಹಾಕಬೇಕು’ ಎ೦ದು ವಿಶ್ವಗುರುಗಳು ಈ ಸಂದರ್ಭಕ್ಕೆ ತಿಳಿ ಹೇಳುವಂತೆ ಬರೆದಿದ್ದಾರೆ.


ಒಗ್ಗಟ್ಟಿನ ಸನ್ಮಾರ್ಗ :
ಅಂತಿಮವಾಗಿ ವಿಶ್ವಗುರುಗಳು ತಮ್ಮ ಉಲ್ಲೇಖದಲ್ಲಿ ‘ ಕ್ರೈಸ್ತರಾಗಿ, ಒಂದೇ ಆತ್ಮರಲ್ಲಿ ದೀಕ್ಷಾಸ್ನಾನ ಗೈದವರು, ಒಂದೇ ದೇಹವಾದವರು, ಪೂರ್ವ ಕ್ರೈಸ್ತರ ನಾಣ್ಣುಡಿಯಂತೆ “ಸದಾ ಒಟ್ಟಿಗೆ ಸಾಗೋಣ” ಎ೦ದು ನುಡಿದ ಪೂಜ್ಯರು ಸದಾಕಾಲವೂ ಸರ್ವಶಕ್ತನ ನೆರಳಿನಲ್ಲಿರುವಾಗ, ಸುಜ್ಞಾನ ನಮ್ಮಲ್ಲಿ ಬೇರೂರಿ, ಹಂತ ಹಂತವಾಗಿ ನಮ್ಮನ್ನು ಮುನ್ನಡೆಸಿದಾಗ, ಈ ಭೂಮಿಯ ಪ್ರಯಣದ ಸೋದರತ್ವವನ್ನು ಮರು ಆವಿಷ್ಕರಿಸಬಹುದಾಗಿದೆ. ಪ್ರತಿಯೊಂದು ದಿವ್ಯ ಬಲಿಯರ್ಪಣೆಯಿಂದ, ಒಗ್ಗಟ್ಟಿನ ಪಥದಲ್ಲಿ ಸಾಗಿ, ದೇವರೊಂದಿಗಿನ ಸಮ್ಮಿಲನವೇ ನಮ್ಮ ಗುರಿ ಎಂಬುದನ್ನು ಅರಿತು ಬಾಳೋಣ’. ಎಂಬ ಸುಂದರ ಸಂದೇಶವನ್ನು ರವಾನಿಸಿದ್ದಾರೆ.


ಕನ್ನಡಕ್ಕೆ: ಮೇರಿ ಎಲಿಜಬೆತ್