ಕಾರ್ಡಿನಲ್ ಪಿಯಟ್ರೋ ಪರೋಲಿನ್: ಪವಿತ್ರಪೀಠ ಮತ್ತು ಮೊನಾಕೊ ಮಾನವ ಘನತೆಗಾಗಿ ಕಾರ್ಯನಿರ್ವಹಿಸುತ್ತಿವೆ

1981 ರಲ್ಲಿ ಜಗದ್ಗುರುಗಳ ಪೀಠ ಮತ್ತು ಮೊನಾಕೊ ನಡುವೆ ಜರುಗಿದ ಒಪ್ಪಂದದ 40ನೇ ವಾರ್ಷಿಕೋತ್ವದ ಅಂಗವಾಗಿ ವ್ಯಾಟಿಕನ್ ರಾಜ್ಯದ ಕಾರ್ಯದರ್ಶಿಯವರು ಮೊನಾಕೋ ಸಂಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿಯು ಶುಭ ಸಂದೇಶದ ಮೌಲ್ಯಗಳನ್ನು ಉತ್ತೇಜಿಸುವ ಸಲುವಾಗಿ ಎಂದು ಅವರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಪ್ರಯುಕ್ತ ಕ್ರೀಡಾಪಟುಗಳಿಗೆ ಪಾಲನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಟೋಕ್ಯೋ ಮಹಾಧರ್ಮಪ್ರಾಂತ್ಯ

ಜಪಾನಿನ ಟೋಕ್ಯೋದಲ್ಲಿ ಕಳೆದ ಶುಕ್ರವಾರ ಜರುಗಿದ 32ನೇ ಒಲಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಟೋಕ್ಯೋ ಮಹಾಧರ್ಮಪ್ರಾಂತ್ಯವು ಕ್ರೀಡಾಪಟುಗಳಿಗೆ ತನ್ನ ಪಾಲನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.

ಯುಎಸ್ ಬಿಷಪ್ ಗಳು ಕ್ಯೂಬನ್ ಚರ್ಚ್ ಮತ್ತು ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಾರೆ

ದಶಕಗಳಲ್ಲಿ ಕ್ಯೂಬಾ ಕಂಡ ಕೆಲವು ದೊಡ್ಡ ಸರ್ಕಾರದ ವಿರೋಧಿ ಪ್ರತಿಭಟನೆಗಳ ನಂತರ, ಯುಎಸ್ ಬಿಷಪ್ ಗಳು  ಜನರಿಗೆ ಸಹಾಯವನ್ನು ಮಾಡುವುದರ ಜೊತೆಗೆ  ಕೆರಿಬಿಯನ್ ರಾಷ್ಟ್ರದ ಬಿಷಪ್ ಗಳೊಂದಿಗೆ ಸ್ಪಂದಿಸಿ ಅವರ ಅನುಕೂಲಕರ ಪರಿಹಾರಕ್ಕಾಗಿ ಕರೆ ನೀಡಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಲೆಬನಾನ್ ದೇಶವನ್ನು ಸಂತ ಚಾರ್ಬಲರ ಸನ್ನಿಧಿಗೆ ಸಮರ್ಪಿಸಿದ ಕಾರ್ಡಿನಲ್ ರೈ

ಕಳೆದ ಭಾನುವಾರ ಆಚರಿಸಲಾದ ಸೇಂಟ್ ಚಾರ್ಬೆಲ್ ಮಹೋತ್ಸವದಂದು, ಮರೋನೈಟ್, ಆಂಟಿಯೋಕ್ ನ ಮಹಾಪಿತ ಕಾರ್ಡಿನಲ್ ಬೆಚರಾ ರೈ ರವರು ಲೆಬನಾನ್ ದೇಶವು ಇಂದೆಂದೂ ಕಂಡು ಕೇಳದ ರೀತಿಯಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವುದನ್ನು ಕಂಡು ಶೀಘ್ರವಾಗಿ ಈ ಎಲ್ಲಾ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಬೇಕಾದ ಸಹಾಯವನ್ನು ಕೋರಿ ಸಂತ ಚಾರ್ಬೆಲ್ ರ ಮಧ್ಯಸ್ಥಿಕೆಯನ್ನು ಕೋರಿ ಪ್ರಾರ್ಥಿಸಿದರು.

ಅಮೆರಿಕಾದ ರೆನೋ ಧರ್ಮಕ್ಷೇತ್ರಕ್ಕೆ ನೂತನ ಧರ್ಮಾಧ್ಯಕ್ಷರನ್ನು ನೇಮಿಸಿದ ಪೋಪ್

ಮಹಾಧರ್ಮಾಧ್ಯಕ್ಷ ರಾಂಡೋಲ್ಫರೋಕ್ ಕ್ಯಾಲ್ವೊ ನಂತರ ಧರ್ಮಾಧ್ಯಕ್ಷ ಡ್ಯಾನಿಯಲ್ ಹೆನ್ರಿ ಮುಗಿನ್ಬಾರ್ಗ ಅವರನ್ನು ಅಮೆರಿಕದ ನೆವಾಡ ರಾಜ್ಯದ ರೆನೋ ಧರ್ಮಕ್ಷೇತ್ರಕ್ಕೆ ನೂತನ ಧರ್ಮಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಅಫ್ಘಾನಿಸ್ತಾನ: ಕಾಬೂಲ್‌ನಲ್ಲಿ ಅಧ್ಯಕ್ಷರ ಭವನವನ್ನು ಗುರಿಯಾಗಿಸಿ ರಾಕೆಟ್ ದಾಳಿ ಮಾಡಲಾಗಿದೆ

ಭಾರೀ ಭದ್ರವಾದ ಕೋಟೆಯುಳ್ಳ ಹಸಿರು ವಲಯದಾದ್ಯಂತ ಇರುವ ಅರಮನೆ ಮಾತ್ರವಲ್ಲದೆ, ಅಮೆರಿಕದ ಮಿಷನ್ ಸೇರಿದಂತೆ ಹಲವಾರು ರಾಯಭಾರ ಕಚೇರಿಗಳನ್ನು ಹೊಂದಿರುವ ಈ ಸ್ಥಳದಲ್ಲಿ ದಾಳಿ ನಡೆದಿದೆ.

ಡಿಎಸಿಎ ಅಮಾನತು ತೀರ್ಪು: ಕಾಂಗ್ರೆಸ್ ಕಾರ್ಯಪ್ರವೃತ್ತವಾಗುವಂತೆ ಯುಎಸ್ ಧರ್ಮಾಧ್ಯಕ್ಷರ ಬೇಡಿಕೆ

ನ್ಯಾಯಾಧೀಶ ಆಂಡ್ರ್ಯೂ ಹ್ಯಾನ್ಸೆನ್ ಅವರು ಶುಕ್ರವಾರ ನೀಡಿದ ತೀರ್ಪಿನಲ್ಲಿ, ಹೊಸ ನಿಯಮಗಳನ್ನು ರೂಪಿಸುವಲ್ಲಿ ಅಳವಡಿಸುವ ಸಾಮಾನ್ಯ “ಸೂಚನೆ ಮತ್ತು ಕಾಮೆಂಟ್” ಪ್ರಕ್ರಿಯೆಯನ್ನು ತಪ್ಪಿಸುವ, ಫೆಡರಲ್ ಶಾಸನಾ ರಚನೆಯನ್ನು  ನಿಯಂತ್ರಿಸುವ ಆಡಳಿತಾತ್ಮಕ ಕಾರ್ಯವಿಧಾನವನ್ನು ಡಿಎಸಿಎ ಉಲ್ಲಂಘಿಸುತ್ತದೆ ಎಂದು ತೀರ್ಮಾನಿಸಲಾಗಿದೆ

ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ನಾವು ಹೃದಯದ ಪರಿಸರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು!

ಭಾನುವಾರ ಪೋಪ್ ಫ್ರಾನ್ಸಿಸ್ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಕರುಣೆ, ಮರುಕ ಮತ್ತು ಏಕಾಗ್ರಚಿತ್ತದ ಮೂಲಕ ನಮ್ಮ ಹೃದಯದ ಪರಿಸರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಒಂದು ಬೆಳವಣಿಗೆಗೆ ಸೂಕ್ತವಾದ ಸಮಯವೆಂದರೆ ಅದು ಬೇಸಿಗೆಗಾಲ ಎಂದು ಹೇಳಿದರು.

1962 ರ ರೋಮನ್ ಪೂಜಾವಿಧಿಯ ಬಳಕೆಗೆ ಸಂಬಂಧಿಸಿದ ಹೊಸ ಕಾರ್ಯಸೂಚಿಗಳು: ಧರ್ಮಾಧ್ಯಕ್ಷರುಗಳಿಗೆ ಹೆಚ್ಚಿನ ಜವಾಬ್ದಾರಿ

ಶುಕ್ರವಾರದಂದು ವಿಶ್ವಗುರುಗಳು ವ್ಯಾಟಿಕನ್ ಸಮ್ಮೇಳನದ ಪೂರ್ವದ ಪೂಜಾವಿಧಿಗಳನ್ನು ಮರುವ್ಯಾಖ್ಯಾನಿಸಲು ಸ್ಥಳೀಯ ಬಿಷಪ್‌ಗಳಿಗೆ ಅನುಮತಿ ನೀಡುವ ಅಧಿಕೃತ ಪತ್ರವನ್ನು ಪ್ರಕಟಿಸಿದ್ದಾರೆ. ವ್ಯಾಟಿಕನ್ ಸಮ್ಮೇಳನದ ಪೂರ್ವಭಾವಿ ಪೂಜಾವಿಧಿಗಳ ಸಭೆಯಲ್ಲಿ ಪಾಲ್ಗೊಳ್ಳುವ ಗುಂಪುಗಳು ಎರಡನೇ ವ್ಯಾಟಿಕನ್ ಕೌನ್ಸಿಲ್ ಮತ್ತು ಉನ್ನತ ಗುರುಗಳ ಬೋಧನಾ ಸಮಿತಿ ಆದೇಶಿಸಿದ ಪ್ರಾರ್ಥನಾ ಸುಧಾರಣೆಯ ಮಾನ್ಯತೆಯನ್ನು ನಿರಾಕರಿಸಬಾರದು ಎಂದರು.

ಯುರೋಪ್ ಪ್ರವಾಹ: 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1,000 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ

ಕನಿಷ್ಠ 120 ಜನರು ಮೃತಪಟ್ಟಿರುವುದು ದೃಡಪಟ್ಟಿದೆ. ಇದಲ್ಲದೆ, ಜರ್ಮನಿ, ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ಗೆ ಭೀಕರ ಪ್ರವಾಹ ಉಂಟಾಗಿ 1,300 ಜನರು ಕಾಣೆಯಾಗಿದ್ದಾರೆ. ಹೆಚ್ಚಿನ ಬಲಿಪಶುಗಳು ಜರ್ಮನಿಯಲ್ಲಿ ವರದಿಯಾಗುವುದು ಖಚಿತವಾಗಿದೆ.

A WordPress.com Website.

Up ↑

Create your website with WordPress.com
Get started